
ಅದು ಎಲ್ಲ ಪೋಷಕರೂ, ಪಾಲಕರ, ಕುಟುಂಬ ವರ್ಗದ ಆಸೆಯೂ ಆಗಿರುತ್ತದೆ. ಇನ್ನೂ ಕೂಸು ಹುಟ್ಟುವ ಮುನ್ನವೇ ಮಗುವಿಗೆ ಯಾವ ನರ್ಸರಿಯಲ್ಲಿ, ಯಾವ ಸ್ಕೂಲಿನಲ್ಲಿ ಅಡ್ಮಿಷನ್ ಮಾಡಬೇಕೆಂಬ ಲೆಕ್ಕಾಚಾರ ಆರಂಭಗೊಂಡಿರುತ್ತದೆ. ಇದಕ್ಕೆ ಪೂರಕವಾಗಿ ಯಾವೆಲ್ಲ ಶಿಬಿರಗಳಲ್ಲಿ, ತರಬೇತಿಗಳಲ್ಲಿ ಅವನು ಅಥವಾ ಅವಳು ಪಾಲ್ಗೊಳ್ಳಬೇಕು? ಯಾವ ಕೋಸರ್್ಗಳನ್ನು ಪೂರೈಸಬೇಕು? ಯಾವ ಕೋಚಿಂಗ್ ಕ್ಲಾಸ್ಗೆ ಸೇರಿಸಿದರೆ ಉತ್ತಮ ರ್ಯಾಂಕ್ ಪಡೆಯಲು ಸಾಧ್ಯವಾದೀತು? ಇಂತಹ ನೂರಾರು ಗಣಿತಗಳು ಪೋಷಕರನ್ನು ಕೊರೆಯುತ್ತಿರುತ್ತವೆ.
ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದರೆ ತಕ್ಷಣ ವಿಜ್ಞಾನ ವಿಭಾಗಕ್ಕೆ ಸೇರಿಸಿದರಾಯಿತು. ಪಿಯುಸಿ ಬಳಿಕ ಡಾಕ್ಟರ್ ಅಥವಾ ಇಂಜಿನಿಯರಿಂಗ್ ಶಿಕ್ಷಣಕ್ಕೆ ತೊಡಗಿಸಿದರೆ ಸಾಕು. ಎಂಬ ಪ್ರವೃತ್ತಿ ಪ್ರತಿಯೊಬ್ಬ ಪೋಷಕರಲ್ಲೂ ದಿನಗಳೆದಂತೆ ಹೆಚ್ಚುತ್ತಿದೆ. ಮಗು ಈ ಎಲ್ಲ ಸ್ಟೇಜ್ಗಳನ್ನು ದಾಟುವ ಸಂದರ್`ದಲ್ಲಿ ಇವರು ಒಂದು ಬಾರಿಯೂ ನೀನು ಏನಾಗಬೇಕೆಂದಿದ್ದೀಯ? ಯಾವ ಕ್ಷೇತ್ರ ನಿನಗೆ ಆಸಕ್ತಿದಾಯಕವಾದುದು? ಎಂದು ಕೇಳುವ ಗೋಜಿಗೇ ಹೋಗಿರುವುದಿಲ್ಲ. ಹಳ್ಳಿಯಿಂದ ಪಟ್ಟಣದ ಸಂದಿ ಗೊಂದಿಗಳನ್ನು ಸೇರಿದ ಅನೇಕ ಕುಟುಂಬಗಳಲ್ಲಿ ಹೆತ್ತವರಿಬ್ಬರೂ ಉದ್ಯೋಗಕ್ಕೆ ತೆರಳುವುದರಿಂದ ಮಗುವೂ ತನ್ನ ಪಾಡಿಗೆ ತಾನಿರುತ್ತದೆ. ಅವುಗಳ ಪಾಲಿಗೆ ತನ್ನ ಪೇರೆಂಟ್ಸ್ ಫೀಸು ತೆತ್ತು ಸಲಹೆ, ಸೂಚನೆ ಕೊಡುವ ಗೈಡ್ಳಂತೆ ಅಷ್ಟೆ.
ವೃತ್ತಿ ಬದುಕಿರಲಿ, ವಿದ್ಯಾಥರ್ಿ ಜೀವನವಿರಲಿ, ಮೌಲ್ಯಗಳು ಅವುಗಳ ಜೊತೆಯಾದರಷ್ಟೇ ಜೀವನಕ್ಕೂ ಒಂದು ಸುಂದರವಾದ ಅರ್ಥ ಬರುತ್ತದೆ.ಈ ಕಲ್ಪನೆಯಲ್ಲೇ ಬದುಕು ಸಾಗಬೇಕೇ ಹೊರತು ಕೇವಲ ವೃತ್ತಿ ಅಂಟಿಕೊಂಡೇ ನಡೆಸುವ ಜೀವನ ಒಳ್ಳೆಯ ಮನುಷ್ಯನನ್ನು, ವ್ಯಕ್ತಿತ್ವವನ್ನು ಬೆಳಗಲಾರದು. ತಮ್ಮ ಸಂಸ್ಕೃತಿಯ ಹೊಳಹುಗಳನ್ನು ಸ್ಪರ್ಶವೇ ಇಲ್ಲದೆ ಬದುಕೊಂದು ರೂಪಿತವಾಗುತ್ತದೆ. ಇಲ್ಲಿ ಸಂಸ್ಕೃತಿಯೂ, ಸಾಂಸ್ಕೃತಿಕತೆಯ ಲವಲೇಶವೂ ಇರುವುದಿಲ್ಲ. ಪಾಶ್ಚಾತ್ಯರ ``ೆಭೋಗವಾದದ' ಅನುಕರಣೆಯೇ ಇಂದಿನ ಸಮಾಜದ ಈ ವಿಪ್ಲವಗಳಿಗೆ ಕಾರಣವೆನ್ನುವುದು ಪ್ರತಿಶತ ಸತ್ಯ.
ಅಲ್ಲಿ ಸಂಬಂಧಗಳಿರುವುದಿಲ್ಲ. ಬದಲಾಗಿ ಸಂಪರ್ಕವಷ್ಟೇ ಇರುತ್ತದೆ. ಓರ್ವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಗುತ್ತಿಗೆ(ಕಾಂಟ್ರಾಕ್ಟ್) ವಹಿಸಿರುವಂತೆ ನಡೆದುಕೊಳ್ಳುತ್ತಾನೆಯೇ ಹೊರತು ಅಲ್ಲಿ ಗಟ್ಟಿ ಸಂಬಂಧವಿರುವುದಿಲ್ಲ. ಮಾನವೀಯತೆ, ಕರುಣೆ, ನಂಬಿಕೆ, ವಿಶ್ವಾಸ, ಸೌಹಾರ್ದತೆಗಳು ಪಾಲು ಪಡೆದುಕೊಂಡಿರುವುದಿಲ್ಲ. ಹೀಗಾಗಿ `ತನ್ನ ಪಾಡಿಗೆ ತಾನು' ಎಂಬ ವಿಚಿತ್ರ ಮನೋಧರ್ಮ ಮೂಡುತ್ತಿದೆ. ಆದ್ದರಿಂದಲೇ ಪಾಶ್ಚಾತ್ಯರ ಜೀವನ ಜೀವನಶೈಲಿಯತನ್ನೊಮ್ಮೆ ಗಮನಿಸಿ . ಅವರಿಗೆ ಹಣವೇ ಸರ್ವಸ್ವ.
ಮೌಲ್ಯ, ಸಂಸ್ಕೃತಿಗಳು ಅಮುಖ್ಯವಾಗಿ, ದೇಶದ ಆಥರ್ಿಕತೆಯ ಬಲವರ್ಧನೆಯಷ್ಟೇ ಅವರ ಗಮ್ಯವಾಗಿರುತ್ತದೆ. ಅವರಿಗೆ ಆಥರ್ಿಕ ತಜ್ಞರು, ವಿಮೋಚನಾ ಚಳವಳಿಯ ನಾಯಕರಷ್ಟೇ ಆದರ್ಶಪ್ರಾಯರು. ಸುತ್ತಲಿನ ಸಮಾಜದೊಂದಿಗೆ, ಪ್ರಕೃತಿಯೊಂದಿಗೂ ಒಂದು ತಾದಾತ್ಮ್ಯವಾದ ನಂಟು ಬೆಳೆದಿರುವುದಿಲ್ಲ.
ನಮ್ಮದು ಹಾಗಲ್ಲ ...ಋಷಿ ಪರಂಪರೆ, ಮಹಾನ್ ಸಂತರು, ಮಹೋನ್ನತ ಜ್ಞಾನಿಗಳು, ಪುರಾಣಗಳು, ಕಾವ್ಯಗಳ ಸು`ದ್ರ ತಳಪಾಯವಿದೆ. ಆದ್ದರಿಂದ ಮಹಾನ್ ದಾರ್ಶನಿಕರು, ಸತ್ಪುರುಷರು ಹಾಕಿಕೊಟ್ಟ ಮೇಲ್ಪಂಕ್ತಿಯ ಹಾದಿಯನ್ನೇ ನಾವೂ ಸವೆಸಬೇಕಾಗುವುದು ಅಗತ್ಯವಾಗುತ್ತದೆ. ಯಾವ ಆಯಾಮದಿಂದ ನೋಡಿದರೂ ನಮ ಸಂಸ್ಕೃತಿಯ ಲಾಲಿತ್ಯವನ್ನು ಈ ಞಛ್ಚಿಜಚ್ಞಜ್ಚಿಚ್ಝ ಸಂಸ್ಕೃತಿಗಳೊಂದಿಗೆ ಥಳಕು ಹಾಕದಿರುವುದೆ ಲೇಸು.
`ನನ್ನ ಮಗ/ಮಗಳು ಒಳ್ಳೆಯ ವಿದ್ಯಾ`್ಯಾಸವನ್ನು ಕಲಿತು, ಪರೋಪಕಾರಿಯಾಗಿ, ಎಲ್ಲರ ಹಿತೈಷಿಯಾಗಿ ಗೌರವ, ಸ್ವಾಭಿಮಾನದಿಂದ ಸಮಾಜದಲ್ಲಿ ಬದುಕಬೇಕು. ಅದೂ ಸಂಸ್ಕೃತಿಯ ಮೂಲ ಆಶಯದ ಚೌಕಟ್ಟಿನಲ್ಲೇ ಮೌಲ್ಯಗಳಲ್ಲೇ ನಡೆಯಬೇಕು ಎಂಬುದು ಆಶಯ, ಆಚರಣೆಯಾಗಬೇಕು.
ಆದರೆ ನಾವೂ ಕಾಲಕ್ರಮೇಣ ಞಛ್ಚಿಜಚ್ಞಜ್ಚಿಚ್ಝ ಆಗುತ್ತಿದ್ದೇವೆ ಎನಿಸುತ್ತಿದೆ. ಕುಟುಂಬದೊಳಗಿನ ಸಂಬಂಧಳು ಜಾಳಾಗುತ್ತಿವೆ. ಪರಿಸರದೊಮದಿಗಿನ ನಂಟೂ ಹಳಸುತ್ತಿದೆ, ಅ`ದ್ರವಾಗುತ್ತಿದೆ, ಅಪರೂಪವಾಗುತ್ತಿದೆ. ಸ್ವೇಚ್ಛಾಚಾರಕ್ಕೆ ಆಸ್ಪದ ನೀಡುತ್ತಿದ್ದೇವೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ. ಆದರೆ ಅದೇ ಮನೆಯ ಬೀರುಗಳಲ್ಲಿಂದು ಅಡಗಿಸಿಟ್ಟ ಅಪ್ಪನ ಬಿಯರ್, ಫ್ರೋಸ್ಟರ್ಸ್, ಸಿಗ್ನೇಚರ್ ಬಾಟಲಿಗಳು, ವಿದೇಶದಿಂದಲೇ ತರಿಸಿರುವ ಮೆಲರ್್ಬೊರೊ, ಬ್ಲ್ಯಾಕ್ ಮೆಂಥೊಲ್ ಹಾಗೂ 555 ಸಿಗರೇಟ್ಗಳು, ಪ್ಯಾಕ್ಗಳು ಈ ಮೌಲ್ಯಗಳನ್ನೇ ಅಣಕಿಸುತ್ತವೆ. ಅಮ್ಮನೂ ಅಷ್ಟೆ ಆಕೆಗೂ `ಹೊಂದಾಣಿಕೆ' `ಒಪ್ಪಂದ' ್ಚಟ್ಞ್ಚಛಿಟಠಿಗಳು ಸ್ಪಷ್ಟವಾಗಿ ತಿಳಿದಿರುವುದರಿಂದ ಇವುಗಳಿಗೆ ಆಕೆಯೂ ಒಗ್ಗಿಹೋಗಿದ್ದಾಳೆ. ಬಹುಶಃ ಇದೇ ಕಾರಣಕ್ಕೋ ಏನೋ ಅನೇಕ ಕಡೆಗಳಲ್ಲಿ ಅಮ್ಮಂದಿರೂ ಕೂಡಾ, `ಜೀವನದಲ್ಲಿ ಮುಂದೆ ಬರಬೇಕು, ಹಣ ಗಳಿಸಬೇಕು, ವಿದೇಶಕ್ಕೆ ತೆರಳಬೇಕು, ಲಕ್ಷ ಲಕ್ಷ ಸಂಪಾದಿಸಬೇಕು. ಬಂಗಲೆ, ಕಾರು ಖರೀದಿಸಬೇಕು ಎಂದು ಮಕ್ಕಳಿಗೆ ಉಪದೇಶಿಸುತ್ತಾರೆಯೇ ಹೊರತು ಪೂಜೆ-ಪುನಸ್ಕಾರಗಳು, ಸಂಬಂಧಗಳು, ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೂ ಪರವಾಗಿಲ್ಲ 'ಎಂದು ರಾಜೀಸೂತ್ರದ ಮಾತನ್ನಾಡುತ್ತಾಳೆ.
ಏನೇ ಆದರೂ, ದುಶ್ಚಟಗಳಿಗೆ ಬಲಿಯಾಗಬೇಡ ಎನ್ನುತ್ತಿದ್ದವಳು, ಮಗ ಓರಗೆಯವರೊಂದಿಗೆ ಸೇರಿಕೊಂಡು ಸಿಗರೇಟು ಎಳೆಯುತ್ತಿದ್ದಾನೆಂದರೂ ಅದನ್ನು ಕಿವಿಗೇ ಹಾಕಿಕೊಳ್ಳುವುದಿಲ್ಲ. ಅಲ್ಲಿ ಮತ್ತೆ ಸಂಬಂಧ ಕಡಿದು ಹೋಗುವ ಅಪಾಯದ ಮುನ್ಸೂಚನೆಯೂ ಆಕೆಗಿರುತ್ತದೆ. `ಅದೀಗ ಮಾಮೂಲು' ಎಂದು ಒಂದೇ ವಾಕ್ಯದಲ್ಲಿ ಮಾತಿಗೆ ಫುಲ್ಸ್ಟಾಪ್ ಹಾಕುತ್ತಾಳೆ. ಇಂತಹ ಸಂದರ್`ಗಳಲ್ಲಿ ಒಂದು ಬಾರಿ 2-3 ದಶಕಗಳ ಹಿಂದಿನ ಅಮ್ಮಂದಿರನ್ನು ಕಲ್ಪಿಸಿಕೊಳ್ಳಿ. ಎಲ್ಲ ಆಚರಣೆಗಳೂ, ಸಂಭ್ರಮಗಳೂ ಅವರ ಪಾಲಿಗಿದ್ದವು. ಆದರೆ ಈಗ ಈ ಅಮ್ಮನೂ ಸೊಫೆಸ್ಟಿಕೇಟೆಡ್ ಆಗಿದ್ದಾಳೆ. `ಜಾಗತೀಕರಣದ ಮಾ` ಆಗಿ ಪರಿವರ್ತನೆಯಾಗುತ್ತಿರುವುದೂ ದುರಂತ. ಅವಳೂ ಮಗನೇ ಸಮಾಜದಲ್ಲಿ ಗೌರವದಿಂದ ನಿನ್ನದೇ ಆದ ಶೈಲಿಯ ಜೀವನವನ್ನು ನಡೆಸು ಎನ್ನುವುದಿಲ್ಲ. ವೃತ್ತಿಯಲ್ಲಿ ಹಣ ಗಳಿಸುವುದೇ ಅಲ್ಲ. ಮೌಲ್ಯಗಳೊಂದಿಗೆ ಬದುಕುವುದು, ಸನಾತನ ಸಂಸ್ಕೃತಿಯ ಮೂಲಸತ್ವದೊಂದಿಗೆ ಬದುಕುವುದು. ಏನಂತಿರಾ?
ವೃಷಾಂಕ್ ಖಾಡಿಲ್ಕರ್

No comments:
Post a Comment